ಮಾನ್ವಿ: ಪತ್ರಕರ್ತ ಸಂಘದ ಚುನಾವಣಾ ಪ್ರಚಾರ ಕಾರ್ಯ
Manvi, Raichur | Nov 2, 2025 ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಪ್ರಯುಕ್ತ ಮಾನ್ವಿಯ ಅತಿಥಿ ಗೃಹದಲ್ಲಿ ಆರ್.ಗುರುನಾಥ ನೇತೃತ್ವದ ಪ್ಯಾನಲ್ ನಿಂದ ಮತಯಾಚನೆ ಮಾಡಲಾಯಿತು. ಜಿಲ್ಲಾದ್ಯಕ್ಷ ಸ್ಥಾನದ ಅಭ್ಯರ್ಥಿ ಆರ್.ಗುರುನಾಥ ಮಾತನಾಡಿ, ಈ ಬಾರಿ ಜಿಲ್ಲೆಯಲ್ಲಿ ರಾಜ್ಯ ಸಮ್ಮೇಳನ ರಾಯಚೂರು ಜಿಲ್ಲೆಗೆ ರಾಜ್ಯ ಸಮ್ಮೇಳನ ಜರುಗಲಿದೆ. ಕಳೆದ ಅವಧಿಯಲ್ಲಿ ಜಿಲ್ಲಾ ಸಮಿತಿ ಸಾಕಷ್ಟು ಉತ್ತಮ ಕೆಲಸ ಮಾಡಿದೆ. ಮತ್ತೊಮ್ಮೆ ನಮ್ಮ ಪ್ಯಾನಲ್ ಕಣದಲ್ಲಿದ್ದು , ಬೆಂಬಲಿಸುವಂತೆ ಕೋರಿದರು. ಪ್ರಧಾನ ಕಾರ್ಯದರ್ಶಿ ಅಭ್ಯರ್ಥಿ ಸಿದ್ದಯ್ಯ ಸ್ವಾಮಿ ಮಾತನಾಡಿ, ಪತ್ರಕರ್ತ ಕ್ಷೇಮಾಭಿವೃದ್ಧಿ ದೃಷ್ಟಿಯಲ್ಲಿ ಸಂಘ ಕೆಲಸ ಮಾಡಲಿದೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.