ಯಲ್ಲಾಪುರ ಜ 11 ರಂದು ಶಿರಸಿಯಲ್ಲಿ ನಡೆಯಲಿರುವ “ಬೇಡ್ತಿ–ವರದಾ ನದಿ ಜೋಡಣೆ ವಿರೋಧಿಸಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶಕ್ಕೆ” ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಶಾಸಕರಾದ ಶಿವರಾಮ ಹೆಬ್ಬಾರ್ ಅವರು, ನಾಳೆ ಕರೆ ನೀಡಿದ್ದಾರೆ. ನಾಳೆ ಭಾನುವಾರ ನಡೆಯುವ ಈ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿಗಳು, ರೈತ ಬಂಧುಗಳು ಹಾಗೂ ನಾಗರಿಕರು ಒಂದಾಗಿ ಭಾಗವಹಿಸಿ ಪ್ರಕೃತಿ ರಕ್ಷಣೆಗೆ ಧ್ವನಿಯಾಗಬೇಕೆಂದು ಅವರು ಮನವಿ ಮಾಡಿದ್ದಾರೆ.