ಶಿವಮೊಗ್ಗ: ಜನರು ಕಾಂಗ್ರೆಸ್ ತಿರಸ್ಕಾರದ ತೀರ್ಮಾನ ಮಾಡಿದ್ದಾರೆ: ನಗರದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ರಾಜ್ಯದಲ್ಲಿ ಅಭಿವೃದ್ಧಿಯಲ್ಲಿದೇ. ಅಭಿವೃದ್ಧಿಯ ಪ್ರಶ್ನೆನೇ ಇಲ್ಲ. ಯಾವ ಶಾಸಕರು ಕೂಡ ಸಚಿವರು ಡಿಸಿಎಂ ಹಾಗೂ ಸಿಎಂನ ಕೇಳೋಕೆ ಆಗ್ತಿಲ್ಲ. ಒಂದು ಜಲ್ಲಿ ಕಲ್ಲು ಕೇಳೋಕೆ ಆಗ್ತಿಲ್ಲ. ಶಾಸಕರು ಕೇಳೋ ಧೈರ್ಯ ಹಾಗೂ ಆಸಕ್ತಿ ಇಲ್ಲ ಎಂದು ಶಿವಮೊಗ್ಗದಲ್ಲಿ ಮಾಜಿ ಡಿ ಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲರೂ ಅಧಿಕಾರಕ್ಕಾಗಿ ನುಗ್ಗಾಡ್ತಾ ಇದ್ದಾರೆ. ಈ ಸರ್ಕಾರ ಆದಷ್ಟು ಬೇಗ ಬಿದ್ದೋಗುತ್ತೆ. ಜನರು ಕಾಂಗ್ರೆಸ್ ತಿರಸ್ಕಾರದ ತೀರ್ಮಾನ ಮಾಡಿದ್ದಾರೆ ಎಂದರು.