ಕಲಬುರಗಿ : ಬೆಳೆ ಪರಿಹಾರ ನೀಡುವಲ್ಲಿ ಕಾಳಗಿ ತಾಲೂಕಿನ ರೈತರಿಗೆ ಅನ್ಯಾಯ ಮಾಡಲಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿ ಕಲಬುರಗಿ ಜಿಲ್ಲೆ ಕಾಳಗಿ ಪಟ್ಟಣದಲ್ಲಿ ಡಿ2 ರಂದು ಬೆಳಗ್ಗೆ 11.30 ಕ್ಕೆ ರೈತರು ಪ್ರತಿಭಟನೆ ನಡೆಸಿದ್ದಾರೆ.. ಜಿಲ್ಲಾಡಳಿತ ಬೆಳೆ ಪರಿಹಾರ ಹಣ ಜಮೆ ಮಾಡಿರೋದಾಗಿ ಘೋಷಿಸಿದೆ.. ಆದರೆ ಕಾಳಗಿ ತಾಲೂಕಿನ ಸಾಕಷ್ಟು ರೈತರಿಗೆ ಪರಿಹಾರ ಹಣ ತಲುಪಿಲ್ಲ.. ಅಧಿಕಾರಿಗಳು ಸಮರ್ಪಕವಾಗಿ ಬೆಳೆ ಪರಿಹಾರ ವಿತರಿಸುವಲ್ಲಿ ತಾರತಮ್ಯ ಅನುಸರಿಸುತ್ತಿದ್ದಾರೆಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ..