ಶಿವಮೊಗ್ಗ: ನ.24 ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಬಂದ್, ಮೆಸ್ಕಾಂ ಅಧಿಕಾರಿಗಳು ಮಾಹಿತಿ
ಶಿವಮೊಗ್ಗ ನಗರ ಉಪವಿಭಾಗ-2ರ ವ್ಯಾಪ್ತಿಯಲ್ಲಿನ ಮಂಡ್ಲಿ ಭಾಗದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ನ.24 ರಂದು ಬೆ. 10.30 ರಿಂದ ಸಂಜೆ 4.00ರವರೆಗೆ ಹಳೇಮಂಡ್ಲಿ, ಗಂಧರ್ವನಗರ, ಹರಕೆರೆ, ಶಂಕರಕಣ್ಣಿನ ಆಸ್ಪತ್ರೆ, ವಿಜಯವಾಣಿ ಪ್ರೆಸ್ ಹತ್ತಿರ, ಸಾವಾಯಿ ಪಾಳ್ಯ, ಕುರುಬರ ಪಾಳ್ಯ, ಶ್ರೀನಿವಾಸ ಲೇಔಟ್, ಇಲಿಯಾಜ್ ನಗರ 1 ರಿಂದ 4ನೇ ಕ್ರಾಸ್, ನಾರಾಯಣ ಹೃದಯಾಲಯ, ಗಜಾನನ ಗ್ಯಾರೇಜ್, ಮಂಜುನಾಥ ರೈಸ್ ಮಿಲ್, ಬೆನಕೇಶ್ವರ ರೈಸ್ ಮಿಲ್, ಅನ್ನಪೂರ್ಣೇಶ್ವರಿ ಬಡಾವಣೆ, ಎಫ್ -5 ಗಾಜನೂರು ಗ್ರಾಮಾಂತರ ಪ್ರದೇಶ, ಎಫ್ -8 ರಾಮಿಕೊಪ್ಪ ಗ್ರಾಮಾಂತರ ಪ್ರದೇಶ ಹಾಗೂ ಐಪಿ ಲಿಮಿಟ್ನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ