ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗ್ರಾಮದ ಬಳಿ ಇರುವ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಓರ್ವ ಕಾರ್ಮಿಕ ಸಾವನ್ನಪ್ಪಿದ ಘಟನೆ ಇಂದು ಬುಧುವಾರ 1 ಗಂಟೆಗೆ ನಡೆದಿದೆ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯ ಆಸ್ಪತ್ರೆಗೆ ರವಾನೆ ಮಾಡಿದ್ದು ಬಾಗಲಕೋಟೆ ಜಿಲ್ಲೆಯ ಕೆರೊಡಿ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ಮುಂದುವರೆದಿದ್ದು ರಮೇಶ್ ಬಾಬುಲಾಲ್ ರಾಮ್ ಎಂಬಾತ ಮೃತ ಕಾರ್ಮಿಕನಾಗಿದ್ದು ನಂದಕುಮಾರ್,ರಮೇಶ್ ಮಹೇಂದ್ರ ರಾಮ್ ಗೆ ಗಂಭೀರ ಗಾಯಗಳಾಗಿದ್ದು ಕಾರ್ಮಿಕನ ಸಾವಾಗ್ತಿದ್ದಂತೆ ಕಾರ್ಖಾನೆ ಸೆಕ್ಯುರಿಟಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ ಕಾರ್ಮಿಕರು ಬಿಹಾರದಿಂದ ಆಗಮಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡ್ತಿರುವ ಕಾರ್ಮಿಕರು.