ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮವಾಸೆ ಜಾತ್ರೆಯ ಪ್ರಯುಕ್ತವಾಗಿ ತುಂಗಾ ನದಿಗೆ ಅಡ್ಡಲಾಗಿ ಕಟ್ಟಿರುವಂತಹ ಜಯಚಾಮರಾಜೇಂದ್ರ ಸೇತುವೆಯ ಮೇಲ್ಭಾಗದಲ್ಲಿ ಸುಣ್ಣ ಬಣ್ಣ ಹಾಗೂ ಹೆಸರು ಬರೆಯುವ ಉದ್ದೇಶದಿಂದಾಗಿ ಭಾನುವಾರ ಮತ್ತು ಸೋಮವಾರ ಸೇತುವೆಯ ಮೇಲೆ ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಿಳಿದುಬಂದಿದೆ ಈ ಕುರಿತಾದ ಮಾಹಿತಿಯು ಭಾನುವಾರ ಲಭ್ಯವಾಗಿದ್ದು ವಾಹನ ಸವಾರರು ಹಾಗೂ ಸಾರ್ವಜನಿಕರು ಬಾಳೆಬೈಲಿನ ಬೈಪಾಸ್ ರಸ್ತೆಯ ಮೂಲಕ ಕುರವಳ್ಳಿಯನ್ನ ಹಾಗೂ ಕೊಪ್ಪ ಭಾಗದಿಂದ ಬರುವವರು ಬೈಪಾಸ್ ಮೂಲಕ ತೀರ್ಥಹಳ್ಳಿ ಪಟ್ಟಣಕ್ಕೆ ಹೋಗಬಹುದಾಗಿದೆ.