ಚಿತ್ರದುರ್ಗ: ಚಿಕ್ಕ ಜಾಜೂರು ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಜೊತೆ ದುರ್ವತನೆ: ವಿಡಿಯೋ ವೈರಲ್
ಚಿಕ್ಕಜಾಜೂಜು ರೈಲ್ವೇ ಸ್ಟೇಶನ್ ನಲ್ಲಿ ಸಿಬ್ಬಂದಿ ಯೊಬ್ಬ ಪ್ರಯಾಣಿಕರ ಜೊತೆ ದುರ್ವರ್ತನೆ ತೋರಿದ್ದಾನೆ. ಈ ಸಂಬಂಧ ಮಂಗಳವಾರ ರಾತ್ರಿ 9 ಗಂಟೆ ಸಮಯಕ್ಕೆ ನಡೆದಿದ್ದ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಶ್ನೆ ಮಾಡಿದ ಸಾರ್ವಜನಿಕರಿಗೆ ಹೊರಹೋಗು ಅಂತಾ ಅವಾಜ್ ಹಾಕಿದ್ದಾರೆ. ಇಂಗ್ಲೀಷ್ ನಲ್ಲಿ ಗೋ ಔಟ್ ಅಂತಾ ಪ್ರಯಾಣಿಕರೊಂದಿಗೆ ದುರ್ವರ್ತನೆ ತೋರಿದ್ದಾನೆ. ರಾತ್ರಿ ವೇಳೆ ರೈಲ್ವೇ ಸ್ಟೇಶನ್ ಪ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಮಲಗಿದ್ದರು. ಪ್ರಯಾಣಿಕರನ್ನು ಹೊರಹಾಕಿ ವಿಶ್ರಾಂತಿ ಕೊಠಡಿ ಬೀಗ ಜಡಿಯಲಾಗಿತ್ತು.ಇದರಿಂದ ಪ್ರಯಾಣಿಕರಿಂದ ರೈಲ್ವೆ ಸಿಬ್ಬಂದಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದರು.