ಕಂಪ್ಲಿ: ನಗರದ ಕೋಟೆ ಬಳಿ ರಸ್ತೆಯಲ್ಲಿ ಬೈಕ್ ಸ್ಕಿಡ್, ಸವಾರರಿಗೆ ಗಾಯ
Kampli, Ballari | Nov 17, 2025 ನವೆಂಬರ್ 16, ಭಾನುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಂಪ್ಲಿ ನಗರದ ಕೋಟೆ ಬಳಿ ನಡೆದ ಬೈಕ್ ಸ್ಕಿಡ್ ಆಗಿದ ಪರಿಣಾಮ ಸವಾರನು ಗಾಯಗೊಂಡಿರುವ ಘಟನೆ ನಡೆದಿದೆ. ಕತ್ತಲಿನಲ್ಲಿ ರಸ್ತೆಯಲ್ಲಿದ್ದ ತಗ್ಗು–ಗುಂಡಿಗಳನ್ನು ಗಮನಿಸದೇ, ಬೈಕ್ ಗುಂಡಿ ಮೇಲೆ ಹಾರಿದ ಕಾರಣ ನಿಯಂತ್ರಣ ತಪ್ಪಿ ಸವಾರ ನೆಲಕ್ಕೆ ಬಿದ್ದಿದ್ದಾನೆ. ಈ ಸಂದರ್ಭದಲ್ಲಿ ಬೈಕ್ನ ಕೆಲವು ಭಾಗಗಳು ಸಹ ಹಾನಿಯಾಗಿವೆ. ಗಾಯಗೊಂಡ ಬೈಕ್ ಸವಾರರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ಕಂಪ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ತಿಳಿದುಬಂದಿದೆ.