ಶಿವಮೊಗ್ಗ: ನಗರ ನಮೋ ಶಂಕರ ಲೇಔಟ್ ಬಳಿ ಗಾಂಜಾ ಸಾಗಾಟ: ವ್ಯಕ್ತಿಯ ಬಂಧನ
ಶಿವಮೊಗ್ಗ ನಗರಕ್ಕಿ ಗಾಂಜಾ ಸಾಗಾಟ ಮಾಡುತ್ತಿದ್ದ ಸಾಗರ ಮೂಲದ ಆರೋಪಿಯನ್ನ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ ಸಾಗರ ಮೂಲ ಕಾರಿನೊಳಗೆ 4 ಕೆ.ಜಿ 30 ಗ್ರಾಂ ಗಾಂಚಾವನ್ನ ಸಾಗಾಟ ಮಾಡುತ್ತಿರುವ ಕುರಿತಾಗಿ ಬಂದಂತಹ ಖಚಿತ ಮಾಹಿತಿ ಇನ್ಸ್ಪೆಕ್ಟರ್ ರವಿ ಪಾಟೀಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಶಿವಮೊಗ್ಗ ನಗರದ ಹಳೆ ಮಂಡ್ಲಿ ಸಮೀಪದ ನಮೋ ಶಂಕರ ಲೇಔಟ್ ಬಳಿ ಆರೋಪಿನ ಪರಿಶೀಲಿಸಿದಾಗ ಗಾಂಜಾ ಪತ್ತೆಯಾಗಿದ್ದು ಆತನನ್ನ ಬಂಧಿಸಲಾಗಿದೆ.ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದ್ದು ಈ ಕುರಿತಾದ ಮಾಹಿತಿ ಶನಿವಾರ ಲಭ್ಯವಾಗಿದೆ.