ಶಿವಮೊಗ್ಗ: ನಗರದಲ್ಲಿ ಉತ್ತಿಷ್ಠತ ಜಾಗೃತ ಕಾರ್ಯಕ್ರಮ
ಶಿವಮೊಗ್ಗ ನಗರದಲ್ಲಿ ಸಂಭ್ರಮದಿಂದ ನಡೆದ ಉತ್ತಿಷ್ಠತ ಜಾಗೃತ ಕಾರ್ಯಕ್ರಮ. ಭಾನುವಾರ ಸಂಜೆ ಶಿವಮೊಗ್ಗ ಕುವೆಂಪುರಂಗ ಮಂದಿರದಲ್ಲಿ ಶ್ರೀ ಶಾರದಾ ಸಂಗೀತ ನೃತ್ಯ ವಿದ್ಯಾಲಯದ ವತಿಯಿಂದ ಜೀವನದ ಹಲವಾರು ಸಮಸ್ಯೆಗಳಿಗೆ ಪರಿಹಾರ ನೀಡುವಂತಹ ಭಗವದ್ಗೀತೆಯ ವಿಶಿಷ್ಟ ಕಲ್ಪನೆಯ ಕಥಾ ನೃತ್ಯ ರೂಪಕ ಕಾರ್ಯಕ್ರಮವನ್ನ ಉತ್ತಿಷ್ಠತ ಜಾಗೃತ ಎಂಬ ಶೀರ್ಷಿಕೆ ಅಡಿಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಯುವತಿಯರು ನೃತ್ಯರೂಪಕದ ಮೂಲಕ ಜನಮನ ಸೆಳೆದರು.