ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಅರಳಿಕಟ್ಟಿ ಅವರ ಜಾಗೆಯಲ್ಲಿ ತ್ರಿಪದಕವಿ ಸರ್ವಜ್ಞ ಯುವಕ ಮಂಡಳಿ ಆಯೋಜಿಸಿರುವ ಕುಂಬಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಾಮೆಂಟ್ ಪಂದ್ಯಾವಳಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಫೆ.೨೭ ಗುರುವಾರ ರಾತ್ರಿ ೧೨ ಗಂಟೆಗೆ ಉದ್ಘಾಟಿಸಿದರು. ಈ ಸಮಯದಲ್ಲಿ ಮಾತನಾಡಿದ ಅವರು ದೇಶಿ ಕ್ರೀಡೆಗಳನ್ನು ಆಡುವದ್ದರಿಂದ ದೇಹ ಸದೃಢವಾಗಿರುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಂಬಾರ ಸಮಾಜದ ಮುಖಂಡರು ಮತ್ತು ಹಿರಿಯರು ಹಾಗೂ ಯುವಕರು ಇದ್ದರು.