ಬಾಗಲಕೋಟೆ: ನಗರದ ಘಟಪ್ರಭ ಹಿನ್ನೀರಿನಲ್ಲಿ ಬೋಟ್ ಸೇವೆ ವಿಳಂಬ,ವಿವಿಧ ಗ್ರಾಮಗಳ ಪ್ರಯಾಣಿಕರ ಆಕ್ರೋಶ
ಘಟಪ್ರಭಾ ಹಿನ್ನೀರಿನ ಬೋಟ್ ಸೇವೆಯಲ್ಲಿ ನಿರಂತರ ವಿಳಂಬ ಹಿನ್ನೆಲೆ.ಬೋಟ್ ಪ್ರಯಾಣಿಕರೆ ಆಕ್ರೋಶ,ಬೋಟ್ ಚಾಲಕನ ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು. ಬಾಗಲಕೋಟೆ ತಾಲೂಕಿನ ಕದಂಪುರ, ಸಾಳಗುಂದಿ, ಯಂಕಂಚಿ ಗ್ರಾಮದ ಪ್ರಯಾಣಿಕರು. ನಿತ್ಯ ಘಟಪ್ರಭಾ ನದಿಯಲ್ಲಿ ಬೋಟ್ ಮೂಲಕ ತಮ್ಮ ಊರುಗಳಿಂದ ಬಾಗಲಕೋಟೆ ಪ್ರಯಾಣಿಸುವ ಜನರು. ಕಳೆದ ಸುಮಾರು ದಿನಗಳಿಂದ ಬೋಟ್ ಸಮಯದಲ್ಲಿ ಬಾರಿ ವ್ಯತ್ಯಾಸ ಆಗುತ್ತಿರುವುದರಿಂದ. ಶಾಲಾ ಮಕ್ಕಳಿಗೂ ತೊಂದರೆ ಆಗುತ್ತದೆ.ವ್ಯಾಪಾರ ವಹಿವಾಟು ಹಾಲು ಮೊಸರು ತರಕಾರಿ ಮಾರಾಟಗಾರರಿಗೆ ತೊಂದರೆ ಆಗುತ್ತದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹ.