ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಿರವಾರ ತಾಲೂಕು ಘಟಕಕ್ಕೆ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹನುಮೇಶ, ಪ್ರಧಾನ ಕಾರ್ಯದರ್ಶಿಯಾಗಿ ನಾಗರಾಜ ಕರಿಬಿಲ್ಕರ್ ಅವಿರೋಧ ಆಯ್ಕೆಯಾದರು. ಇನ್ನೂ ಉಪಾಧ್ಯಕ್ಷರಾಗಿ ಮಹ್ಮದ್ ಸಾಬ್, ಗಂಗಪ್ಪ ಆಯ್ಜೆಯಾದರು. ಕಾರ್ಯದರ್ಶಿಯಾಗಿ ಹುಸೇನ್ ಭಾಷಾ, ಮಹೇಶ ಪಾಟೀಲ್, ಖಜಾಂಚಿಯಾಗಿ ಮಹೇಶ ಪಾಟೀಲ್ ಆಯ್ಕೆಯಾದರು.