ಶಿವಮೊಗ್ಗ: ಸರ್ಕಾರ ಪತನವಾಗುವಂತೆ ಕಾಣ್ತಿಲ್ಲ, ಶಿವಮೊಗ್ಗದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅಚ್ಚರಿ ಹೇಳಿಕೆ
ರಾಜ್ಯದಲ್ಲಿ ನಡೆಯಿತ್ತಿರುವ ಸಿಎಂ ಕುರ್ಚಿ ಕಿತ್ತಾಟ ಹಾಗೂ ರಾಜ್ಯ ರಾಜಕಾರಣವನ್ನ ಸೂಕ್ಷ್ಮವಾಗಿ ಬಿಜೆಪಿ ಗಮನಿಸುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಗುರುವಾರ ಸಂಜೆ 4 ಗಂಟೆಗೆ ಮಾತನಾಡಿದ ಅವರು, ಕುರ್ಚಿ ಕಿತ್ತಾಟ ಕಾಂಗ್ರೆಸ್ ನ ಸಮಸ್ಯೆಯಾಗಿದೆ. ಈ ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಜನರ ಆಶೀರ್ವಾದಕ್ಕೆ ಕಾಂಗ್ರೆಸ್ ಸರಿಯಾಗಿ ಆಡಳಿತ ನೀಡುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ಜನ ಅವರಿಗೆ ಪಾಠ ಕಲಿಸುತ್ತಾರೆ. ಸರ್ಕಾರ ಸಧ್ಯಕ್ಕೆ ಪಥನವಾಗುವಂತೆ ಕಾಣಿಸುತ್ತಿಲ್ಲ. ಮಾಜಿ ಸಿಎಂ ಸದಾನಂದ ಗೌಡರು ಸರ್ಕಾರ ಪಥನವಾಗಲಿದೆ ಬಿಜೆಪಿ ಅಧಿಕಾರಕ್ಕೆ ಬಂದರೂ ಬರಬಹುದು ಎಂದು ಹೇಳಿರುವ ಹೇಳಿಕೆಗೆ ನನ್ನ ಸಹಮತವಿಲ್ಲ ಎಂದರು