ಮಂಡ್ಯ: ಅ.27 ಮತ್ತು 28ರಂದು ಸೆಸ್ಕ್ ಆನ್‌ಲೈನ್ ಸೇವೆಗಳು ಅಲಭ್ಯ: ನಗರದಲ್ಲಿ ಇಇ ಮಾಹಿತಿ
Mandya, Mandya | Oct 25, 2025 ತುರ್ತು ನಿರ್ವಹಣಾ ಕಾರ್ಯನಿಮಿತ್ತ ಅ.27 ಮತ್ತು 28ರಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಆನ್‌ಲೈನ್ ಸೇವೆಗಳು ಲಭ್ಯವಿರುವುದಿಲ್ಲ. ಈ ಕುರಿತು ಶನಿವಾರ ನಗರದಲ್ಲಿ ಸೆಸ್ಕ್ ಇಇ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ನಿಗದಿತ ದಿನಾಂಕಗಳಂದು ತುರ್ತು ನಿರ್ವಹಣೆ ಇರುವುದರಿಂದ ಅಕ್ಟೋಬರ್ 27ರ ರಾತ್ರಿ 8 ಗಂಟೆಯಿಂದ ಅ.28ರ ಬೆಳಗ್ಗೆ 11 ಗಂಟೆಯವರೆಗೆ ಸೆಸ್ಕ್‌ನ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಇನ್ನಿತರ ಆನ್ ಲೈನ್ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ ಎಂದಿದ್ದಾರೆ. ಸೆಸ್ಕ್ ವ್ಯಾಪ್ತಿಯ ಪ್ರದೇಶಗಳಾದ ಮೈಸೂರು, ನಂಜನಗೂಡು, ಕೆ.ಆರ್. ನಗರ, ಮಂಡ್ಯ, ಮಳವಳ್ಳಿ ಮೊದಲೆಡೆ ವ್ಯತ್ಯಯವಾಗಲಿದೆ.