ಅಫಜಲಪುರದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ ಹಾಗೂ ವಿವಿಧ ಸಂಘಟನೆಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಶರಣಬಸಪ್ಪಾ ಮಮಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕಬ್ಬು ಬೆಳೆಗಾರರ ವಿರೋಧಿ ನಿಲುವು ತಾಳಿದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.ಸರ್ಕಾರಗಳು ತಕ್ಷಣ ನೆರವಿಗೆ ಧಾವಿಸಿ ಬೆಳೆಗಾರರಿಗೆ ನ್ಯಾಯವಾದ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಲಾಯಿತು. ಅತಿವೃಷ್ಟಿಯಿಂದ ಹಾನಿಗೊಳಗಾದ ರೈತರಿಗೆ ತುರ್ತು ಪರಿಹಾರ ಘೋಷಿಸಿ, ಎನ್ಡಿಆರ್ಎಫ್ ಮಾನದಂಡವನ್ನು ಹೆಚ್ಚಿಸಲು ಒತ್ತಾಯಿಸಲಾಯಿತು. ನವೆಂಬರ್ 5ರಂದು ಅಫಜಲಪುರ ತಾಲೂಕಿನಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲು ನಿರ್ಧರಿಸಲಾಯಿತು ಎಂದು ಶುಕ್ರವಾರ 8ಗಂಟೆಗೆ ಮಾಹಿತಿ