ಬಸವಕಲ್ಯಾಣ: ಕಿಟ್ಟಾ ಗ್ರಾಮದಲ್ಲಿ ಸಚಿವರಿಂದ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಲೋಕಾರ್ಪಣೆ
ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದಲ್ಲಿ 2.75 ಕೋಟಿ ರೂ. ಅನುದಾನದ ಅಡಿಯಲ್ಲಿ ನಿರ್ಮಿಸಲಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಇಂದು ಉದ್ಘಾಟಿಸಿದೆನು. ಗ್ರಾಮೀಣ ಜನತೆಗೆ ಸುಲಭ, ಗುಣಮಟ್ಟದ ಮತ್ತು ಸಮರ್ಪಕ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ನಿರ್ಮಿಸಲಾದ ಈ ಕೇಂದ್ರದ ಮೂಲಕ ತಾಯಿ-ಮಗು ಆರೋಗ್ಯ, ಲಸಿಕೆಕರಣ, ತುರ್ತು ಚಿಕಿತ್ಸೆ ಹಾಗೂ ವಿವಿಧ ಪ್ರಾಥಮಿಕ ವೈದ್ಯಕೀಯ ಸೇವೆಗಳು ಇನ್ನಷ್ಟು ಬಲವಾಗಲಿವೆ.