ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣ ಈಗಾಗಲೇ ಸಾಕಷ್ಟು ರೀತಿಯಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೃಹತ್ ವಾಹನಗಳು ನಗರ ಪ್ರವೇಶಿಸುವಂತೆ ಈಗ ಒಂದು ಬೈಪಾಸ್ ರಸ್ತೆ ಘೋಷಣೆ ಮಾಡಲಾಗಿದೆ. ಎರಡು ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಒಂದು ಬೈಪಾಸ್ ರಸ್ತೆ ಕಾಮಗಾರಿ ಮಾಡಲು ಟೆಂಡರ್ ಕರೆಯಲಾಗಿದ್ದು, 24 ತಿಂಗಳ ಒಳಗಾಗಿ ಈ ಒಂದು ರಸ್ತೆ ಕಾಮಗಾರಿ ಮುಗಿಸುವ ಒಂದು ಟಾರ್ಗೆಟ್ ನೀಡಲಾಗಿದ್ದು ಐದು ವರ್ಷಗಳ ನಿರ್ವಹಣೆ ಕೂಡ ಮಾಡುವ ಜವಾಬ್ದಾರಿಯನ್ನ ಗುತ್ತಿಗೆದಾರರಿಗೆ ವಹಿಸಲಾಗಿದೆ.