ಶಿವಮೊಗ್ಗ ಜಿಲ್ಲೆಯ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾಗಿ ಎರಡನೇವರಿಗೆ ಯುವ ನಾಯಕ ಪ್ರಶಾಂತ್ ಕುಕ್ಕೆ ಮರು ಆಯ್ಕೆ ಆಗಿದ್ದು, ಜಿಲ್ಲಾ ಯುವ ಮೋರ್ಚಾ ಇತಿಹಾಸದಲ್ಲಿಯೇ ಹಾಲಿ ಅಧ್ಯಕ್ಷರೊಬ್ಬರು ಪುನರಾಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತಾದ ಮಾಹಿತಿ ಭಾನುವಾರ ಲಭ್ಯವಾಗಿದ್ದು, ಬಿಜೆಪಿ ಸಂಘಟನೆಯನ್ನು ಬಲಪಡಿಸುವಲ್ಲಿ ಶ್ರಮಿಸುತ್ತಿರುವ ಕುಕ್ಕೆ ಪ್ರಶಾಂತ್ ರಾಜ್ಯ ಯುವ ಮೋರ್ಚಾದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಜಿಲ್ಲಾ ಸಂಘಟಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.