ಚಳ್ಳಕೆರೆ ನಗರದಲ್ಲಿಂದು ಪೊಲೀಸ್ ಇಲಾಖೆ ವತಿಯಿಂದ ವಾರದ ಕವಾಯತು ಹಾಗೂ ಫಿಟ್ನೆಸ್ ತಪಾಸಣೆ ನಡೆಸಲಾಯಿತು. ಡಿವೈಎಸ್ಪಿ ಸತ್ಯನಾರಾಯಣರಾವ್ ಅವರ ನೇತೃತ್ವದಲ್ಲಿ ಚಳ್ಳಕೆರೆ ನಗರದ ಬಿಸಿನೀರು ಮುದ್ದಪ್ಪ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ವಾರದ ಕವಾಯತು ಹಾಗೂ ಫಿಟ್ನೆಸ್ ತಪಾಸಣೆ ಹಮ್ಮಿಕೊಂಡಿದ್ದು ಡಿವೈಎಸ್ಪಿ ಸತ್ಯನಾರಾಯಣರಾವ್ ಅವರು ಸಿಬ್ಬಂದಿಗಳ ಪಿಟ್ ನೆಸ್ ತಪಾಸಣೆ ನಡೆಸಿದರು. ಪೊಲೀಸರು ಆರೋಗ್ಯದ ದೃಷ್ಠಿಯಿಂದವಮಬಸಿಗರೇಟ್, ಆಲ್ಕೋಹಾಲ್ನಂತಹ ಚಟದ ಸಮಸ್ಯೆಯಿಂದ ದೂರ ಇರಬೇಕು ಎಂದು ತಿಳಿಸಿದರು