ಚಿಂತಾಮಣಿ: ರೈತನ ಮೇಲೆ ಗುಂಡು ಹಾರಿಸಿದವರ ಮೇಲೆ ರೌಡಿ ಶೀಟರ್ ತೆರೆಯಲು ನಗರದಲ್ಲಿ ರೈತ ಸಂಘ ಒತ್ತಾಯ
ಮಂಚೇನಹಳ್ಳಿ ಗ್ರಾಮದಲ್ಲಿ ಕಲ್ಲು ಕ್ವಾರಿ ಅನುಮತಿಯನ್ನು ಕೂಡಲೇ ರದ್ದುಗೊಳಿಸಿ ರೈತನ ಮೇಲೆ ಗನ್ ಶೂಟ್ ಮಾಡಿರುವ ಉದ್ಯಮಿ ಸಕಲೇಶ್ ರವರನ್ನು ರೌಡಿಶೀಟರ್ ಮಾಡಿ ಜಿಲ್ಲೆಗೆ ಕಾಲು ಇಡದಂತೆ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಾಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷರಾದ ಹೆಚ್ಎನ್ ಕದಿರೇಗೌಡ ಮಾತನಾಡಿ ಮಂಚೇನಹಳ್ಳಿ ಗ್ರಾಮದ ಸರ್ವೆ ನಂಬರ್ ರಲ್ಲಿ ಕಲ್ಲು ಕ್ವಾರಿಗೆ ಅನುಮತಿ ನೀಡಿದ್ದು ಇದರ ಹಿನ್ನಲೆಯಲ್ಲಿ ಅತಿಯಾದ ಶಬ್ದ ಹಾಗೂ ದೂಳಿನಿಂದ ಅಕ್ಕಪಕ್ಕದ ಜಮೀನುಗಳ ರೈತರಿಗೆ ತುಂಬಾ ತೊಂದರೆ ಯಾಗುತ್ತಿದೆ ಎಂದು ದೂರಿದರು.