ಮೂರು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಭೇದಿಸಿರುವ ಸೊರಬ ಪೊಲೀಸರು ಮಂಗಳವಾರ ಆರೋಪಿಯನ್ನು ಬಂಧಿಸಿದ್ದು ಬುಧವಾರ ಬೆಳಿಗ್ಗೆ 10 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಸೊರಬ ತಾಲ್ಲೂಕಿನ ಜೇಡಗೇರಿ ಸಮೀಪದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಲತೇಶ್ (35) ಬಂಧಿತ. ಕಾನಕೊಪ್ಪ ಹೊಸೂರು ಗ್ರಾಮದ ಈತ, ಅನೈತಿಕ ಸಂಬಂಧದ ಕಾರಣ ತಮ್ಮ ರಾಮಚಂದ್ರ ನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಎನ್ನಲಾಗಿದೆ. ರಾಮಚಂದ್ರ ಒಂದೂವರೆ ತಿಂಗಳಾದರೂ ಮನೆಗೆ ಬಾರದ ಕಾರಣ ಪೋಷಕರು ಸೆ.8ರಂದು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆಯಲ್ಲಿ ಕೊಲೆ ಸತ್ಯ ಗೊತ್ತಾಗಿದೆ