ರಾಯಚೂರು: ನಗರದ ಗದ್ವಾಲ್ ರಸ್ತೆಯಲ್ಲಿ ರಾತೋ ರಾತ್ರಿ ಜೆಸಿಬಿ ಕಳುವು
ನಗರದ ಗದ್ವಾಲ್ ರಸ್ತೆ ಪೆಟ್ರೋಲ್ ಬಂಕ್ బళి ಇರಿಸಲಾಗಿದ್ದ ಜೆಸಿಬಿ ರಾತ್ರೋರಾತ್ರಿ ಕಳುವಾದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ 10 ಗಂಟೆಗೆ ದೊರೆತ ಮಾಹಿತಿ ಪ್ರಕಾರ ಜೆಸಿಬಿ ಮಾಲೀಕ ರಮೇಶ್ ಎಂದಿನಂತೆ ಗದ್ವಾಲ್ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಕೆಎ 36 ಪಿ 5651 ನಂಬರಿನ ಜೆಸಿಬಿ ನಿಲ್ಲಿಸಿದ್ದರು. ನ.5 ರಂದು ಸಂಜೆ 4 ಗಂಟೆಗೆ ಜೆಸಿಬಿ ಪಂಚರ್ ಆದ ಕಾರಣ ಪೆಟ್ರೋಲ್ ಬಂಕ್ ಬಳಿ ಬಿಡಲಾಗಿತ್ತು. ನವಂಬರ್ 6 ರಂದು ಮುಂಜಾನೆ ಬಂದು ನೋಡಿದಾಗ ಜೆಸಿಬಿ ಪೆಟ್ರೋಲ್ಬಂಕ್ ಬಳಿ ಇಲ್ಲದೆ ಇರುವುದು ಕಂಡು ಮಾಲೀಕರು ಅಚ್ಚರಿಗೊಂಡು ಮಾರ್ಕೆಟ್ ಯಾರ್ಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.