ಚಳ್ಳಕೆರೆ: ಈಚರ್ ಲಾರಿ- ಆಟೋ ನಡುವೆ ಡಿಕ್ಕಿ, ವಿಧ್ಯಾರ್ಥಿ ಸಾವು: ವಿಡಪಲಕುಂಟೆ ಬಳಿ ಅಪಘಾತ
ಭಾನುವಾರ ಬೆಳಿಗ್ಗೆ 10 ಗಂಟೆ ವೇಳೆಗೆ ವಿಡಪಲಕುಂಟೆ ಬಳಿ ಲಾರಿಯೊಂದು ಆಟೋಗೆ ಡಿಕ್ಕಿಯಾಗಿ, ಒರ್ವ ವಿಧ್ಯಾರ್ಥಿ ಸಾವನ್ನಪ್ಪಿರುವ ಘಟನೆ ಜರುಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ವಿಡಪಲಕುಂಟೆ ಬಳಿ ಜರುಗಿದೆ. ಮೃತ ವಿದ್ಯಾರ್ಥಿಯನ್ನ ಅಯಾನ್ (11) ವಿಡಪಲಕುಂಟೆ ನಿವಾಸಿ ಎಂದು ಗುರುತಿಸಲಾಗಿದೆ. ತಂದೆ ಜೊತೆ ಆಟೋದಲ್ಲಿ ತೆರಳುತ್ತಿದ್ದ ವೇಳ ಲಾರಿ ಡಿಕ್ಕಿಯಾಗಿದೆ. ಈಚರ್ ಲಾರಿ ಚಾಲಕನ ಅತಿವೇಗ & ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಪರಶುರಾಮಪುರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ