ಲಿಂಗಸೂರು: ಮುದುಗಲ್ : ಶಾಲಾ ವಾಹನಕ್ಕೆ ಟಾಟಾ ಏಸ್ ಡಿಕ್ಕಿ, ವಿದ್ಯಾರ್ಥಿಗಳಿಗೆ ಗಾಯ
ಸಮೀಪದ ಕೆ.ಮರಿಯಮ್ಮನಹಳ್ಳಿ ಬಳಿ ಜೆಎಂಜೆ ಶಾಲೆಯ ವಾಹನಕ್ಕೆ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎಂಟು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬುಧವಾರ ಸಂಜೆ 5 ಗಂಟೆಗೆ ಶಾಲಾ ವಾಹನ ಕೆ.ಮರಿಯಮ್ಮನಹಳ್ಳಿಯಿಂದ ಮುದಗಲ್ ಪಟ್ಟಣಕ್ಕೆ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಚಾಂದಾ ಪಾಷಾ, ಇಮ್ರಾನ್ ಚಾಂದಾ ಪಾಷಾ, ಸಬಾ ಮುದಗಲ್, ಶ್ರೀನಿವಾಸ ರಾಮಣ್ಣ ಉಪ್ಪಾರ ಎಂಬ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಮುದಗಲ್ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, 3 ವಿದ್ಯಾರ್ಥಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುದುಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.