ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು ಏಳು ಸ್ಥಳೀಯ ಸಂಸ್ಥೆಗಳಿವೆ. ಆದರೆ ಕಳೆದ ಹತ್ತು ವರ್ಷಗಳ ಅಂಕಿ ಅಂಶಗಳನ್ನ ನೋಡಿದ್ರೆ ಜಿಲ್ಲೆಗೆ ಒಟ್ಟಾರೇ 4555 ಮನೆಗಳು ಮಂಜೂರಾಗಿವೆ. ಇದರಲ್ಲಿ 2756 ಮನೆಗಳು ಪೂರ್ಣಗೊಂಡಿವೆ. 412 ನಿರ್ಮಾಣ ಹಂತದಲ್ಲಿದ್ದು, 1378 ಮನೆಗಳು ಅನಿವಾರ್ಯ ಕಾರಣಗಳಿಂದ ತಡೆ ಹಿಡಿಯಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿ ಎಸ್ಪಿ ಜನಾಂಗಕ್ಕೆ 1274 ಎಸ್ಟಿಗೆ 1043 ಮನೆಗಳು ಮಂಜೂರಾಗಿವ. ಆದರೆ ನಿವೇಶನ, ವಸತಿ ರಹಿತರ ಸಮಸ್ಯೆ ಬಗೆಹರಿಸಲು ಹಿಂದಿನ ಸರ್ಕಾರ ಜಿಲ್ಲೆಯ ಮೂರು ನಗರಸಭೆ ವ್ಯಾಪ್ತಿಯಲ್ಲಿ ಸಾಮೂಹಿಕ ಅಪಾರ್ಟಮೆಂಟ್ ಜಿ+ಟು ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿದೆ.ಇದರಿಂದ ಫಲಾನುಭವಿಗಳಿಗೂ ಕೂಡಾ ಮನೆ ನಿರ್ಮಾಣ ಆತಂಕವಾ