ಸಿಎಂ ಬದಲಾವಣೆ ವಿಚಾರ ಹಾಗೂ ಸಿಎಂ ಸ್ಥಾನ ಯಾವುದು ಬದಲಾವಣೆ ಇಲ್ಲ ಎಂದು ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿಚಾರವಾಗಿ ಇಂದು ಗುರುವಾರ 2 ಗಂಟೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಜಮೀರ್ ಅಹ್ಮದ್ ಖಾನ್ ಪದೇ ಪದೇ ನಾನು ಹೇಳಿದ್ದೇನೆ 2028 ರವರೆಗೂ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆಂದು ಯತೀಂದ್ರ ಅವರ ಅಭಿಪ್ರಾಯ ಹೇಳಿದ್ದಾರೆ ಚರ್ಚೆ ಸಿಎಂ ಕುರ್ಚಿಖಾಲಿ ಇದ್ದಾಗ ಬರುತ್ತದೆ ಸಿಎಂ ಕುರ್ಚಿ ಮೇಲೆ ಸಿದ್ದರಾಮಯ್ಯ ಕುಳಿತಿದ್ದಾರೆ 2028 ರವರೆಗೂ ಸಿದ್ದರಾಮಯ್ಯ ಸಿಎಂ ಅಗಿರುತ್ತಾರೆಂದು ಬಹಳಷ್ಟು ಬಾರಿ ಹೇಳಿದ್ದೇನೆ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ ಹೈಕಮಾಂಡ್ ಹಾಕಿರೋ ಗೆರೆಯನ್ನು ಯಾರೂ ದಾಟಲ್ಲ ನಮ್ಮದು ಹೈಕಮಾಂಡ್ ಪಕ್ಷ ಎಂದರು.