ಬೆಂಗಳೂರು ಉತ್ತರ: ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮೂಹಿಕ ಸ್ವಚ್ಛತಾ ಕಾರ್ಯಕ್ಕೆ ವೇಗ - ಆಯುಕ್ತ ರಾಜೇಂದ್ರ ಚೋಳನ್
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈರ್ಮಲ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಘನತ್ಯಾಜ್ಯ ಸಮರ್ಪಕ ನಿರ್ವಹಣೆ, ತ್ಯಾಜ್ಯ ಸಾಗಾಟ, ಸಾಮೂಹಿಕ ಸ್ವಚ್ಛತಾ ಕಾರ್ಯಗಳು, ರಸ್ತೆ ಮತ್ತು ಪಾದಚಾರಿಗಳ ಮೇಲಿನ ಕಟ್ಟಡಗಳ ತ್ಯಾಜ್ಯ ತೆರವು, ತ್ಯಾಜ್ಯ ಹಾಟ್ ಸ್ಪಾಟ್ ಗಳ ತೆರವು, ರಸ್ತೆ ಬದಿಗಳಲ್ಲಿನ ತ್ಯಾಜ್ಯ, ಅನುಪಯುಕ್ತ ವಸ್ತುಗಳ ತೆರವು ಕಾರ್ಯವನ್ನು ನಿರಂತರವಾಗಿ ನಡೆಸಲಾಗುತ್ತಿದೆ.ಈ ಕುರಿತು ಸೆಪ್ಟೆಂಬರ್ 28ರಂದು ಸಂಜೆ 4 ಗಂಟೆಗೆ ಮಾಹಿತಿ ನೀಡಿದ ಆಯುಕ್ತ ರಾಜೇಂದ್ರ ಚೋಳನ್, 'ಇಂದು ಬೆಳಗ್ಗಿನ ಜಾವದಿಂದಲೇ ಚಾಮರಾಜಪೇಟೆ ವ್ಯಾಪ್ತಿಯ ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಸ್ಥಳಗಳು, ಮೈಸೂರು ರಸ್ತೆಯಲ್ಲಿ, ಸಾಮೂಹಿಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು' ಎಂದು ತಿಳಿಸಿದರು