ಕಾಳಗಿ: ರಟಕಲ್ ನಲ್ಲಿ ಸಾಲ ಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿ ರೈತ ಜಾಫರ್ ಖದೀರ (35) ಎಂಬುವವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ನಡೆದಿದೆ. 19 ಎಕರೆ ಜಮೀನಿನಲ್ಲಿ ಒಕ್ಕಲುತನ ಮಾಡುತ್ತಿದ್ದು, ತೆರೆದ ಭಾವಿಯಿಂದ ನೀರಾವರಿ ಮಾಡುತ್ತಿದ್ದರು. ಆದರೆ ಅತಿವೃಷ್ಟಿಯಿಂದ ಬೆಳೆ ನಷ್ಟಗೊಂಡ ಪರಿಣಾಮ ಮನನೊಂದು ಕೃಷಿಗಾಗಿ ಪಡೆದಿದ್ದ 4 ಲಕ್ಷ ಸಾಲದ ಭಾರ ತಾಳಲಾರದೆ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆಂದು ಶೆನಿವಾರ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಇನ್ನು ಮೃತ ರೈತನಿಗೆ ಮಡದಿ ಮತ್ತು ಮೂವರು ಪುಟ್ಟ ಮಕ್ಕಳು ಇದ್ದಾರೆ.