ಕೊಪ್ಪಳ: ಮುನಿರಾಬಾದ ಗ್ರಾಮದ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ7 ದಶಕ ಜಲಾಶಯದ 33 ಕ್ರಸ್ಟ್ ದುರಸ್ತಿಗೆ ರಾಜಕೀಯ ಕೆಸರು ಎರಚಾಟ
Koppal, Koppal | Apr 19, 2025 ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ನಿರ್ಮಾಣವಾಗಿ ಸುಮಾರು 7 ದಶಕಗಳು ಕಳೆದಿವೆ. ಜಲಾಶಯದ 33 ಕ್ರಸ್ಟ್ ಗೇಟ್ಗಳು ಸೇರಿದಂತೆ ಜಲಾಶಯದ ಕಟ್ಟಡ ಹಳೆಯದಾಗಿದ್ದು, ಜಲಾಶಯದ ಭದ್ರತೆಯ ದೃಷ್ಟಿಯಿಂದ ತಜ್ಞರ ತಂಡ ಪರಿಶೀಲಿಸಿ ಕ್ರಮ ಜರುಗಿಸುವುದು ಅಗತ್ಯವಾಗಿದೆ. ಆದರೆ, ಗೇಟ್ ಅಳವಡಿಕೆಯಲ್ಲಿ ರಾಜಕೀಯ ಜಟಾಪಟಿ ಜೋರಾಗಿದ್ದು, ಜಲಾಶಯದ ನಿರ್ಲಕ್ಷಕ್ಕೆ ಕಾರಣವಾಗಿದೆ. ಜಲಾಶಯದ 33 ಕ್ರಸ್ಟ್ ಗೇಟ್ ಬದಲಿಸಬೇಕಿದೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ 2024ರ ಆಗಸ್ಟ್ 11ರಂದು ಕಿತ್ತು ಹೋಗಿ ಆತಂಕ ಸೃಷ್ಟಿಸಿತ್ತು. ಆ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು.