ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಶಿವಮೊಗ್ಗ ಜೈಲ್ ನಲ್ಲಿರುವ ಬುರುಡೆ ಚಿನಯ್ಯನಿಗೆ ಜಾಮೀನು ದೊರೆತರೂ ಬಿಡುಗಡೆಯ ಭಾಗ್ಯ ದೊರೆತಿಲ್ಲ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಪ್ರಕರಣದಲ್ಲಿ ಜಾಮೀನು ಸಿಕ್ಕಿದ್ರೂ ಚಿನ್ನಯ್ಯನಿಗೆ ಬಿಡುಗಡೆ ಭಾಗ್ಯವಿಲ್ಲವಾಗಿದೆ. ನ.25ರಂದು ಚಿನ್ನಯ್ಯನಿಗೆ ಬೆಳ್ತಂಗಡಿ ಕೋರ್ಟ್ ನಿಂದ ಜಾಮೀನು ದೊರೆತಿದೆ, ಜಾಮೀನು ಸಿಕ್ಕಿ 9 ದಿನವಾದ್ರೂ ಚಿನ್ನಯ್ಯ ಬಿಡುಗಡೆ ಆಗಿಲ್ಲ. ಷರತ್ತು ಬದ್ಧ ಜಾಮೀನು ನೀಡಿದ್ದ ಕೋರ್ಟ್, 1 ಲಕ್ಷ ಬಾಂಡ್ ಸೇರಿ 12 ಷರತ್ತು, 1 ಲಕ್ಷ ಬಾಂಡ್ ನೀಡದೆ ಇರುವುದರಿಂದ ಚಿನ್ನಯ್ಯನಿಗೆ ಬಿಡುಗಡೆಯಾಗಿಲ್ಲ. ಶಿವಮೊಗ್ಗ ಜೈಲಿನಲ್ಲೇ ಇರುವ ಚಿನ್ನಯ್ಯ ಸೆಪ್ಟಂಬರ್ ನಲ್ಲಿ ಬಂದಿದ್ದ.