ಕಲಬುರಗಿ: ಸಣ್ಣ ನೀರಾವರಿ ಇಲಾಖೆಯಲ್ಲಿ ಲೂಟಿ, ಅಧಿಕಾರಿ, ಶಾಸಕರ ವಿರುದ್ಧ ನಗರದಲ್ಲಿ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಆರೋಪ
ಕಲಬುರ್ಗಿ ದಕ್ಷಿಣ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆಯಡಿ ಕೆಲಸ ನಡೆದಿದ್ದು ದಾಖಲೆಗಳಲ್ಲಿ ಮಾತ್ರ. ವಾಸ್ತವದಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ ಎಂದು ಜೆಡಿಎಸ್ ಯುವ ಘಟಕದ ಮುಖಂಡ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ. ಭಾನುವಾರ ನಾಲ್ಕು ಗಂಟೆ ಸುಮಾರಿಗೆ ನಗರದಲ್ಲಿ ಮಾತನಾಡಿದ ಅವರು, “ಥರ್ಡ್ ಪಾರ್ಟಿ ವರದಿ” ನೆಪದಲ್ಲಿ ಅಧಿಕಾರಿಗಳು ಹಣ ಬಿಡುಗಡೆ ಮಾಡಿದ್ದಾರೆ. ಪರಿಶೀಲನೆಗೆ ನೇಮಕವಾದ ಥರ್ಡ್ ಪಾರ್ಟಿ ಸಂಸ್ಥೆಯವರು ಹಣ ಪಡೆದು ಸುಳ್ಳು ವರದಿ ನೀಡಿದ್ದು, ಇದರಲ್ಲಿ ಶಾಸಕರಿಗೂ ಕಮಿಷನ್ ಸಿಕ್ಕಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಸರ್ಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.