ಬಳ್ಳಾರಿ: ಹೆಚ್.ಎಲ್.ಸಿ ಕೆನಾಲ್ಗೆ ಸ್ಕಿಡ್ ಬಿದ್ದು, ನೋಡು ನೋಡುತ್ತಿದ್ದಂತೆ ನೀರಲ್ಲಿ ಮುಳುಗಿದ ಕಾರು, ವೀಡಿಯೋ ವೈರಲ್
ಬಳ್ಳಾರಿಯ ಹೊರವಲಯದಲ್ಲಿರುವ ಹೆಚ್.ಎಲ್.ಸಿ ಕೆನಾಲ್ನಲ್ಲಿ ಕಾರೊಂದು ಸ್ಕಿಡ್ ಆಗಿ ನೀರಿಗೆ ಬಿದ್ದು ಮುಳುಗಿರುವ ಘಟನೆ ನವೆಂಬರ್ 16, ಭಾನುವಾರ ಬೆಳಿಗ್ಗೆ ಸುಮಾರು 8:30ರ ವೇಳೆಗೆ ನಡೆದಿದೆ. ಈ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗಿದೆ. ಶಿಫ್ಟ್ ಕಾರು ನಿಯಂತ್ರಣ ತಪ್ಪಿ ಕೆನಾಲ್ಗೆ ಉರುಳಿದ ಕ್ಷಣಗಳನ್ನು ಸ್ಥಳೀಯರು ವೀಡಿಯೋಗೆ ಸೆರೆಹಿಡಿದಿದ್ದು, ನೋಡು ನೋಡುತ್ತಿದ್ದಂತೆ ಕಾರು ಸಂಪೂರ್ಣವಾಗಿ ನೀರಲ್ಲಿ ಮುಳುಗಿದೆ. ಘಟನೆ ಸಂದರ್ಭದಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ ಎಂಬುದು ತಿಳಿದುಬಂದಿದೆ.