ನಾಡಿನಾಧ್ಯಂತ ಇಂದು ಬೆಳಿಗ್ಗೆ 6 ಗಂಟೆಗೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ನಟನೆಯ ಡೆವಿಲ್ ಸಿನಿಮಾ ರಿಲೀಸ್ ಆಗಿದೆ. ಕೋಟೆ ನಾಡು ಚಿತ್ರದುರ್ಗದಲ್ಲಿ ಡೆವಿಲ್ ಸಿನಿಮಾ ವೀಕ್ಷಣೆಗೆ ಅಭಿಮಾನಿಗಳ ಬಾರಿ ಸಂಖ್ಯೆಯಲ್ಲಿ ಲಗ್ಗೆ ಇಟ್ಟಿದ್ದಾರೆ.ನಗರದ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಡೆವಿಲ್ ಸಿನಿಮಾ ಪ್ರದರ್ಶನ ಕಂಡಿದ್ದು, ಸಿನಿಮಾ ನೋಡಲು ರಾತ್ರಿಯಿಡೀ ಕಾದಿದ್ದು, ಬೆಳಿಗ್ಗೆಯೇ ಥಿಯೇಟರ್ ತುಂಬಾ ತುಂಬಿರುವ ನಟ ದರ್ಶನ್ ಅಭಿಮಾನಿಗಳು ಜಮಾಯಿಸಿದ್ದಾರೆ. ನೆಚ್ಚಿನ ನಟನ ಚಿತ್ರ ವೀಕ್ಷಣೆಗೆ ಮುಗಿಬಿದ್ದು ಟಿಕೇಟ್ ಪಡೆದಿದ್ದಾರೆ. ದರ್ಶನ್ ಕಟೌಟ್ ಗೆ ಬೃಹತ್ ಹಾರ ಹಾಕಿ , ಅಭಿಮಾನಿಗಳು ಸಂಭ್ರಮಿಸಿದ್ದಾರೆ.