ಮಾನ್ವಿ: ಸಾರ್ವಜನಿಕ ಸ್ಥಳಗಳಲ್ಲಿ ಹೈಮಾಸ್ ಲೈಟ್ ಅಳವಡಿಕೆಗೆ ಮೊದಲ ಆದ್ಯತೆ
Manvi, Raichur | Nov 7, 2025 ಕರೇಗುಡ್ಡ ಸುಕ್ಷೇತ್ರ ಶ್ರೀ ಮಹಾಂತೇಶ್ವರ ಸಂಸ್ಥಾನ ಮಠಕ್ಕೆ ಬರುವ ಭಕ್ತರಿಗೆ ಹಾಗೂ ಕರೆಗುಡ್ಡ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಹೈ-ಮಾಸ್ ಲೈಟ್ ಹಾಕಲಾಗಿದೆ. ಗ್ರಾಮಸ್ಥರು ಜಾಗ್ರತೆಯಿಂದ ಹೈ ಮಾಸ್ ಲೈಟ್ ಬಳಸುವ ಮೂಲಕ ಕಾಪಾಡಬೇಕು ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಅಳವಡಿಸಲಾದ ಹೈಮಾಸ್ ಲೈಟ್ ಅನ್ನು ಸಚಿವ ಎನ್ಎಸ್ ಬೋಸರಾಜು ಬಟನ್ ಹಾಕುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.