ಶಿವಮೊಗ್ಗ: ನಗರದ ಬಾಲಕಿಯ ಕತ್ತಿನಲ್ಲಿದ್ದ ಚಿನ್ನದ ಸರ ಕಳ್ಳತನ:ದೂರು ದಾಖಲು
ತಾಯಿಯೊಂದಿಗೆ ಟ್ಯೂಷನ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಬಾಲಕಿಯ ಕೊರಳಲ್ಲಿದ್ದ ಚಿನ್ನದ ಸರವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಸಿದು ಪರಾರಿಯಾಗಿರುವಾಗ ಘಟನೆ ಶಿವಮೊಗ್ಗದ ಗೋಪಾಳದ ರಾಮಕೃಷ್ಣ ಶಾಲೆ ಸಮೀಪದಲ್ಲಿ ನಡೆದಿದೆ. ರೂಪ ಎಂಬುವರು ತಮ್ಮ ಮಗಳಾದ ಐಶ್ವರ್ಯಗಳನ್ನು ಟ್ಯೂಷನ್ ನಿಂದ ಕರೆದುಕೊಂಡು ಹೋಗುವ ವೇಳೆ ಈ ಘಟನೆ ನಡೆದಿದ್ದು, ದ್ವಿ ಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಬೈಕ್ ನಲ್ಲಿ ಬಂದಂತಹ ಅಪರಿಚಿತ ಏಕಾಯಕಿ ಮಗಳ ಕುತ್ತಿಗೆಗೆ ಕೈ ಹಾಕಿ ಸರಕಸಿದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮವಾರ ಮಾಹಿತಿ ಲಭ್ಯವಾಗಿದೆ.