ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಶನಿವಾರ 11ಗಂಟೆಗೆ ಜನ ವೇದಿಕೆ ಮತ್ತು ಕರ್ನಾಟಕ ಜನ ಆರೋಗ್ಯ ವತಿಯಿಂದ ಮಾನ್ವಿ ಪಟ್ಟಣದ ಬಸವೇಶ್ವರ ವೃತ್ತದಿಂದ ಜನ ಆರೋಗ್ಯ ಚಳುವಳಿಯ ಕಾರ್ಯಕರ್ತರು ವಿವಿಧ ಸಂಘಟನೆಯ ಮುಖಂಡರು ರಾಜ್ಯಮಟ್ಟದ ನಮ್ಮ ಆರೋಗ್ಯ ನಮ್ಮ ಹಕ್ಕು ಅಭಿಯಾನ ಆರಂಭಿಸಿತು ಪ್ರತಿಯೊಬ್ಬ ನಾಗರಿಕರಿಗೂ ಉತ್ತಮವಾದ ಆರೋಗ್ಯ ಸೌಲಭ್ಯ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಒಂದು ಅಭಿಯಾನ ಆರಂಭಿಸಲಾಗಿದೆ. ಮಾನ್ವಿ ಪಟ್ಟಣದ ಪ್ರಮುಖ ಬೀದಿಗಳ ಮುಖಾಂತರ ಜಾತ ನಡೆಸಿ ಕೊನೆಗೆ ತಹಸಿಲ್ದಾರ್ ಮುಖಾಂತರ ಆರೋಗ್ಯ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು .