ಸಂಡೂರು: ತಾಲೂಕಿನಲ್ಲಿಎಗ್ಗಿಲ್ಲದೇ ಅಕ್ರಮ ಗ್ರಾವೆಲ್ ದಂಧೆ; ಪಟ್ಟಣದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆರೋಪ
ಅಕ್ರಮ ಅದಿರು, ಅಕ್ರಮ ಮರಳು ಇದೆಲ್ಲ ಮುಗಿತು ಎನ್ನುವಷ್ಟರಲ್ಲಿ ಇದೀಗ ಗ್ರ್ಯಾವೆಲ್ ಸಂಡೂರು ತಾಲೂಕಿನಲ್ಲಿ ಜೋರಾಗಿದೆ. ವಿಂಡ್ ಫ್ಯಾನ್ ಮತ್ತು ರಸ್ತೆ ನಿರ್ಮಾಣಕ್ಕೆ ಬೇಕಾಗುವ ಗ್ರ್ಯಾವೆಲ್ ಗೆ ಎಲ್ಲಿಲ್ಲದ ಬೆಲೆ ಬಂದಿದೆ.. ಸರ್ಕಾರಿ ಸ್ಥಳ ಸೇರಿದಂತೆ ಸಿಕ್ಕ ಸಿಕ್ಕಲ್ಲಿ ಗ್ರ್ಯಾವೆಲ್ ತೆಗೆಯವ ಮೂಲಕ ಸರ್ಕಾರಕ್ಕೆ ರಾಜಧನ ವಂಚನೆ ಮಾಡಲಾಗುತ್ತಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆರೋಪಿಸಿದ್ದಾರೆ. ಸಂಡೂರು ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ 3ಗಂಟೆಗೆ ಸುದ್ದಿಗಾರರೋಂದಿಗೆ ಮಾತನಾಡಿದ ಅವರು ಸಂಡೂರಿನಲ್ಲಿ ಗ್ರ್ಯಾವೆಲ್ ಅಕ್ರಮ ದಂಧೆ ಜೋರಾಗಿ ನಡೆಯುತ್ತಿದೆ. ಅನುಮತಿ ಪಡೆಯೋದು ರಾಜಧನ ಕಟ್ಟೋದು ಒಂದು ಸರ್ವೇ