ರಸ್ತೆ ಬದಿ ನಿಂತಿದ್ದ ಡೀಸೆಲ್ ಟ್ಯಾಂಕ್ ಲಾರಿಗೆ ಕಾರು ಒಂದು ಡಿಕ್ಕಿ ಹೊಡೆದು ಐದು ಜನರಿಗೆ ಗಾಯವಾದ ಘಟನೆ ನೀರಮಾನ್ವಿ ಗ್ರಾಮದ ಬಳಿ ಜರುಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ಬಳಿ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಡಿಸಲ್ ಟ್ಯಾಂಕ್ ಲಾರಿಗೆ ಹಿಂಬದಿಯಿಂದ ಬಂದ ರಿಟ್ಸ್ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಸೇರಿ ಕಾರಿನಲ್ಲಿದ್ದ 5 ಜನರಿಗೆ ಗಾಯಗಳಾಗಿದ್ದು ಮಾನ್ವಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.