ಹೆಬ್ರಿ: ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ
Hebri, Udupi | Mar 13, 2024 ಹೆಬ್ರಿ ಮೆಸ್ಕಾಂ ಉಪ ವಿಭಾಗ ಕಚೇರಿಯಲ್ಲಿ ಬುಧವಾರ ಜನ ಸಂಪರ್ಕ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕಾರ್ಕಳದ ಕಾರ್ಯನಿರ್ವಾಹಕ ಇಂಜಿನಿಯರ್ ನರಸಿಂಹ ವಹಿಸಿದ್ದರು. ಹೆಬ್ರಿ ಉಪ ವಿಭಾಗದ ಎಇ ನಾಗರಾಜ್, ಸಹಾಯಕ ಇಂಜಿನಿಯರ್ ರಾಧಿಕಾ, ಜೆಇ ಲಕ್ಷ್ಮೀಶ್, ಕಿರಿಯ ಇಂಜಿನಿಯರ್‌ಗಳಾದ ಸಂದೀಪ್, ರಾಘವೇಂದ್ರ ಹಾಗೂ ಸಿನಿಯರ್ ಸಹಾಯಕ ಶಿವಕುಮಾರ್ ಉಪಸ್ಥಿತರಿದ್ದರು. ವಿದ್ಯುತ್ ಬಳಕೆದಾರರು ತಮ್ಮ ಬೇಡಿಕೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದರು.