ಚಿಕ್ಕಬಳ್ಳಾಪುರ: ಸಹಕಾರ ಸಂಘದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳ ಭರ್ಜರಿ ಗೆಲುವು
ಚಿಕ್ಕಬಳ್ಳಾಪುರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು ಆಡಳಿತ ರೂಢ ಪಕ್ಷ ಶಾಸಕ ಪ್ರದೀಪ್ ಈಶ್ವರ್ ಗೆ ಬಾರೀ ಮುಖಭಂಗ ಆಗಿದೆ. 14 ಸ್ಥಾನಗಳಲ್ಲಿ 13 ಎನ್ ಡಿಎ ಪಕ್ಷಗಳ ಬೆಂಬಲಿಗರು ಜಯ ಸಾಧಿಸಿದ್ದಾರೆ. ಕೇವಲ ಒಂದು ಸ್ಥಾನ ಮಾತ್ರ ಗೆದ್ದು ಸೋಲು ಒಪ್ಪಿಕೊಂಡಿದ್ದಾರೆ. ಗೆದ್ದ ಅಭ್ಯರ್ಥಿ ಗಳಿಂದ ನಗರದಲ್ಲಿ ಪಟಾಕಿ ಸಿಡಿಸಿ ಹಾರತೂರಾಯಿಗಳನ್ನು ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ. ತಮ್ಮ ಗೆಲುವಿಗೆ ಸಂಸದ ಸುಧಾಕರ್ ಅವರ ಮಾರ್ಗದರ್ಶನಗಳು ನೆರವಾಗಿದ್ದು ಅವರ ನೇತೃತ್ವದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದೇವೆ ಎಂದು ಸಂಸತ ವ್ಯಕ್ತಪಡಿಸಿದರು.