ಚಿತ್ರದುರ್ಗ: ರೈತನಿಗೆ ಪರಿಹಾರದ ಹಣ ಕೊಡದ ಚಿತ್ರದುರ್ಗದ ಕೆಪಿಟಿಸಿಎಲ್ ಕಂಪನಿಗೆ ಎಲೆಕ್ಟ್ರಾನಿಕ್ ವಸ್ತುಗಳ ಜಪ್ತಿಯ ಶಿಕ್ಷೆ ಕೊಟ್ಟ ಕೋರ್ಟ್
ರೈತನಿಗೆ ಪರಿಹಾರ ಕೊಡದ ಕೆಪಿಟಿಸಿಎಲ್ ಕಂಪನಿಯ ವಸ್ತುಗಳನ್ನ ಕೋರ್ಟ್ ಆದೇಶದ ಮೇರೆಗೆ ಜಪ್ತಿ ಮಾಡಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಇನ್ನೂ ಬುದವಾರ ಸಂಜೆ 5 ಗಂಟೆ ವೇಳೆ ಘಟನೆ ನಡೆದಿದ್ದು ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ರೈತ ಮಲ್ಲಿಕಾರ್ಜುನ ಎಂಬುವವರ ಜಮೀನಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕೆಪಿಟಿಸಿಎಲ್ ನ ವತಿಯಿಂದ 220 ಕೆವಿ ಲೈನ್ ಎಳೆದಿದ್ದು ಇದರಿಂದಾಗಿ ರೈತ ಮಲ್ಲಿಕಾರ್ಜುನ ಅವರು ಬೆಲೆದ ಈರುಳ್ಳಿ, ಹೂ, ಹುಣಸೆಮರ ಕಡಿದಿದ್ದರಿಂದಾಗಿ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ರೈತ ಪರಿಹಾರಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ನಲ್ಲಿ ವಾದ ವಿವಾದ ನಡೆದು ರೈತನಿಗೆ ಎರಡು ಲಕ್ಷದ ಎಂಬೈತ್ತೇದು ಸಾವಿರ ಪರಿಹಾರದ ಹಣ ಕೊಡುವಂತೆ ಚಿತ್ರದುರ್ಗದ ಕೆಪಿಟಿಸಿಎಲ್ ಗೆ ಕೋರ್ಟ್ ಆದೇಶ ನೀಡಿತ್ತು