ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ನಗರದ ಹೊರವಲಯದ SRS ಸಂಸ್ಥೆಯ ಮಕ್ಕಳು ಅಭಿನಯಿಸಿದ ರಾಮಾಯಣ ನಾಟಕ ಇಂಡಿಯನ್ ಬುಕ್ಆಫ್ ರೆಕಾರ್ಡ್ಸ್ ಸೇರಿದೆ. SRS ಸಂಸ್ಥೆಯ 5ರಿಂದ 10 ನೇ ತರಗತಿಯ ಸುಮಾರು 322 ಮಕ್ಕಳು ನಾಟಕದಲ್ಲಿ ಭಾಗಿಯಾಗಿದ್ರು. ಇದೇ ಮೊದಲ ಬಾರಿಗೆ ವಾಲ್ಮೀಕಿ ಬರೆದ ರಾಮಾಯಣವನ್ನು ನಾಟಕವಾಗಿ ಮಕ್ಕಳು ಅಭಿನಯಿಸಿದ್ದಾರೆ. ಬಾಲಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದೆ ಕಾಂಡ, ಸುಂದರಕಾಂಡ, ಯುದ್ಧಕಾಂಡ ಹೀಗೆ ವಿವಿಧ ಭಾಗಗಳಲ್ಲಿ ವಿವಿಧ ತರಗತಿಗಳ ಮಕ್ಕಳು ಅಭಿನಯ ಮಾಡಿದ್ರು. ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ನಡೆದ ಸುಧೀರ್ಗ ನಾಟಕವನ್ನು ಇಂಡಿಯನ್ ಬುಕ್ ಆಪ್ ರೆಕಾರ್ಡ್ಸ್ ನ ಡಾ. ಸಹಾಯರಾಜ್ ವೀಕ್ಷಣೆ ಮಾಡಿದ್ದಾರೆ.