ಹೊಳಲ್ಕೆರೆ: ದುಮ್ಮಿ ಗ್ರಾಮದಲ್ಲಿ ಕ್ಷುಲ್ಲಕ ವಿಷಯಕ್ಕೆ ವ್ಯಕ್ತಿ ಮೇಲೆ ಹಲ್ಲೆ: ಹೊಳಲ್ಕೆರೆ ಠಾಣೆಯಲ್ಲಿ ದೂರು ದಾಖಲು
ಯುವಕನೊಬ್ಬ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೈದ ಯುವಕ ಮಂಜುನಾಥ್ ದುಮ್ಮಿ ಗ್ರಾಮದ ನಿವಾಸಿ. ಹೊಳಲ್ಕೆರೆ ತಾಲೂಕು ಅಂಜನಪುರ ಗ್ರಾಮದ ವ್ಯಕ್ತಿ ರಾಜಪ್ಪ(55) ಎಂಬುವವರು ದುಮ್ಮಿ ಗ್ರಾಮದ ಅಂಗಡಿಯಲ್ಲಿ ಸಾಮಗ್ರಿಗಳನ್ನು ಖರೀದಿಸುತ್ತಿರುವಾಗ ಯುವಕನೊಬ್ಬ ಜೋರಾಗಿ ಆತನ ಬೈಕ್ ಹಾರನ್ ಮಾಡಿದ್ದು ಅದಕ್ಕೆ ಏಕೆ ಜೋರಾಗಿ ಹಾರನ್ ಮಾಡುತ್ತೀಯ ಎಂದು ಕೇಳಿದ್ದಕ್ಕೆ ಯುವಕ ಮಂಜುನಾಥ್ ಏಕಾಏಕಿ ಬಂದು ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿ ರಾಜಪ್ಪ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲೇ ಇದ್ದ ಅವರ ತಮ್ಮ ಅಲ್ಲಿಗೆ ಧಾವಿಸಿ ರಾಜಪ್ಪನವರನ್ನು ಚಿಕಿತ್ಸೆಗಾಗಿ ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ