ಚಿತ್ರದುರ್ಗ: ನರೇನಾಳ್ ಗ್ರಾಮಕ್ಕೆ ಎಂಟ್ರಿ ಕೊಟ್ಟ ನರಿ: ನರಿ ಮೇಲೆ ಬೀದಿ ನಾಯಿಗಳ ದಾಳಿ
ಕೋಟೆನಾಡು ಚಿತ್ರದುರ್ಗದಲ್ಲಿ ಕಾಡಿನಿಂದ ನಾಡಿಗೆ ನರಿಯೊಂದು ಎಂಟ್ರಿ ಕೊಟ್ಟಿದೆ. ನರಿ ಗ್ರಾಮಕ್ಕೆ ಎಂಟ್ರಿ ಕೊಡ್ತಿದ್ದಂತೆ ರೊಚ್ಚಿಗೆದ್ದ ಬೀದಿನಾಯಿಗಳು ನರಿ ಮೇಲೆ ಅಟ್ಯಾಕ್ ಮಾಡಿವೆ. ಬೀದಿನಾಯಿಗಳಿಂದ ನರಿ ಮೇಲೆ ನಡು ರಸ್ತೆಯಲ್ಲಿ ಅಟ್ಯಾಕ್ ಮಾಡಿದ್ದು, ಜೀವ ಉಳಿಸಿಕೊಳ್ಳಲು ನರಿ ಹರಸಾಹಸ ಪಟ್ಟಿದೆ.ಚಿತ್ರದುರ್ಗದ ನೆರೇನಾಳ್ ಗ್ರಾಮದಲ್ಲಿ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಡೆದ ಘಟನೆ ಇದಾಗಿದೆ. ನರಿ ಮೇಲೆ ಏಕಾಏಕಿ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದ್ದು, ಬೀದಿ ನಾಯಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ನರಿ ಕಾಡಿಗೆ ಹೊರಟಿದೆ. ಸಧ್ಯ ನರಿ& ನಾಯಿ ನಡುವಿನ ಕಿತ್ತಾಟ ಸ್ಥಳೀಯದ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ