ಕಮಲಾಪುರ ಪಟ್ಟಣದ ಮಾತೃ ವಾತ್ಸಲ್ಯ ಶಾಲೆಯಲ್ಲಿ ಕನ್ನಡ ಕಲಾ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಅಚ್ಚುಕಟ್ಟಾಗಿ ಜರುಗಿತು. ರಾಮ ಮಂದಿರ, ಕಲಬುರಗಿ ಸಿಟಿ, ಪ್ರಾಕೃತಿಕ ಸೌಂದರ್ಯ, ಸೋಲಾರ್ ಸಿಸ್ಟಮ್, ಆಸ್ಪತ್ರೆ ವಾತಾವರಣ, ಜಾತ್ರಾ ಸಂಭ್ರಮ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಕಲಾ ಹಾಗೂ ವಿಜ್ಞಾನ ಚಟುವಟಿಕೆಗಳನ್ನು ಮಕ್ಕಳು ಪ್ರದರ್ಶಿಸಿದರು. ಸೇಡಂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ಚಂದ್ರಶೇಖರ್ ಚಿಕ್ಕೇಗೌಡ ಹಾಗೂ ಕಲಬುರಗಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಡಾ. ಅರವಿಂದ್ ರಾಠೋಡ ಮುಖ್ಯ ಅತಿಥಿ ಹಾಗೂ ಮೌಲ್ಯ ನಿರ್ಣಾಯಕರಾಗಿ ಭಾಗವಹಿಸಿ ಮಕ್ಕಳ ಕಲಿಕೆಯ ನೋಟ ನೋಡಿ ಹರ್ಷ ವ್ಯಕ್ತಪಡಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಾಂತಂವೀರಯ್ಯ ಮಠಪತಿ, ಕಾರ್ಯದರ್ಶಿ ಎಂ.ಎಸ್.ಮಠಪತಿ, ಉಪಕಾರ್ಯದರ್ಶಿ ಪರಮೇಶ್ವರಿ ಮ