ನಾಯಕನಹಟ್ಟಿ ಸಮೀಪದ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲೇದೋರನಹಟ್ಟಿ 6ನೇ ವರ್ಷದ ಶ್ರೀ ಪಾಂಡುರಂಗ ರುಕ್ಕಣಿ ದೇವರ ದಿಂಡಿ ಉತ್ಸವ ಶನಿವಾರ ಮತ್ತು ಭಾನುವಾರ ಅದ್ದೂರಿಯಾಗಿ ಜರುಗಿತು.
ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇಬೋರನಹಟ್ಟಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಸಂತ ಮಂಡಳಿಯ ಯುವಕರು ಪಾಂಡುರಂಗಸ್ವಾಮಿ ಭಕ್ತರು ಹಾಗೂ ಸದ್ಭಕ್ತರು ಇವರಿಂದ ಶ್ರೀ ಪಾಂಡುರಂಗ ರುಕ್ಕಿಣಿ ದೇವರ 6ನೇ ವರ್ಷದ ದಿಂಡಿ ಉತ್ಸವವನ್ನು ಸಂಭ್ರಮ ಸಡಗರದಿಂದ ಅದ್ಧೂರಿಯಾಗಿ ಆಚರಿಸಲಾಯಿತು. ಜಿನಿಗಿ ಹಳ್ಳದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಗಂಗಾ ಪೂಜೆ ನೆರವೇರಿಸಲಾಯಿತು. ಅಲ್ಲಿಂದ ಮಹಿಳೆಯರು ಕುಂಭಮೇಳದೊಂದಿಗೆ ವಿವಿಧ ಭಜನಾ ತಂಡಗಳೊಂದಿಗೆ ಶ್ರೀ ಪಾಂಡುರಂಗ ರುಕ್ಕಿಣಿ ದೇ