ಯಾದಗಿರಿ: ನಗರದ ಜಯ ಕರ್ನಾಟಕ ಸಂಘಟನೆ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ
Yadgir, Yadgir | Sep 30, 2025 *ಕನ್ನಡ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿ: ವಿಶ್ವನಾಥ ನಾಯಕ* ಯಾದಗಿರಿ: ಕನ್ನಡ ನಾಡು ನುಡಿ ನೆಲ ಜಲ ರಕ್ಷಣೆ ಕೇವಲ ಕನ್ನಡ ಪರ ಹೋರಾಟಗಾರರ ಕೆಲಸವಷ್ಟೇ ಅಲ್ಲ ಪ್ರತಿಯೊಬ್ಬ ಕನ್ನಡಿಗನ ಜವಬ್ದಾರಿಯಾಗಿದೆ ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಬಿ.ಎನ್. ವಿಶ್ವನಾಥ ನಾಯಕ ಹೇಳಿದರು. ನಗರದ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಸಂಘಟನೆಗೆ ನೂತನವಾಗಿ ಸೇರ್ಪಡೆಯಾದವರಿಗೆ ಸ್ವಾಗತ, ಜವಬ್ದಾರಿ ವಹಿಸಿ ನೇಮಕಾತಿ ಆದೇಶಪತ್ರಗಳು ವಿತರಣೆ ಮಾಡಿ ಮಾತನಾಡಿ, ನಾಡು ನುಡಿ ನೆಲ ಜಲ ರಕ್ಷಣೆಗೆ ಹೋರಾಟಮಾಡುವ ಮನೋಭಾವ ಹೊಂದಿರಬೇಕು. ರೈತರು, ಬಡವರಿಗೆ ಅನ್ಯಾಯವಾದಾಗ ಅವರ ಪರವಾಗಿ ಅನ್ಯಾ