ಚಿತ್ರದುರ್ಗ: ಕಳ್ಳರು ಎಂದು ಭಾವಿಸಿ ಇಬ್ಬರಿಗೆ ಥಳಿತ: ದ್ಯಾಮೇನಹಳ್ಳಿ ಬಳಿ ಘಟನೆ
ಆಟೋದಲ್ಲಿ ಹೊರಟಿದ್ದವರನ್ನು ಕಳ್ಳರೆಂದು ಭಾವಿಸಿ ಥಳಿಸಿರುವ ಘಟನೆ ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಜರುಗಿದೆ. ಚಿತ್ರದುರ್ಗ ತಾಲೂಕಿನ ದ್ಯಾಮೇನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 4ರ ಬಳಿಯ ದ್ಯಾಮೇನಹಳ್ಳಿ ಬಳಿ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡು, ಓರ್ವ ಪಾರಾಗಿದ್ದಾನೆ. ಚಿತ್ರದುರ್ಗ ಮೂಲದ ಕಿರಣ್, ಹಾಗೂ ಆಟೋ ಚಾಲಕ ಚಂದ್ರಶೇಖರ್ ಗಾಯಾಳುಗಳಾಗಿದ್ದಾರೆ. ರಾಕಿ ಯುವಕನ ಹೆಂಡತಿ ಊರಿಗೆ ಡ್ರಾಪ್ ಮಾಡಲು ತೆರಳಿದ್ದ ವೇಳೆ ಘಟನೆ ಜರುಗಿದೆ. ರಾಕಿಯನ್ನ ಡ್ರಾಪ್ ಮಾಡಲು ಹೋಗಿದ್ದ ಕಿರಣ್ ಹಾಗೂ ಚಂದ್ರಶೇಖರ್. ಈ ವೇಳೆ ಕಳ್ಳರು ಎಂದು ಭಾವಿಸಿ ಇಬ್ಬರಿಗೂ ಗ್ರಾಮಸ್ಥರು ಥಳಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ.